ಜೀರ್ಣೋಧ್ಧಾರ

ದೇಣಿಗೆ ನೀಡುವ ಭಕ್ತರು,

Axis Bank A/C Name: Shree Sharabeshwara Devastana Sarapady J,
Axis bank Bantwal A/C: 919010047514564, IFSC: UTIB0003855 ಇಲ್ಲಿಗೆ ಪಾವತಿಸಬಹುದು.

Welcome to Sri Sharabheshwara temple sarapady
history

ತ್ರೇತಾಯುಗದಲ್ಲಿ ಶ್ರೀ ಶರಭಂಗ ಮಹರ್ಷಿಯಿಂದ ಪ್ರತಿಷ್ಠೆಗೊಂಡು ಅವರ ಪಾವನ ಕರಗಳಿಂದ ಪೂಜಿಸಿದ ಲಿಂಗರೂಪಿ ಶ್ರೀ ಶರಭೇಶ್ವರ ದೇವರು ಎಂದು ಪುರಾಣಗಳು ಇಲ್ಲಿಯ ಮಹಿಮೆಯನ್ನು ಸಾರುತ್ತವೆ. ಶ್ರೀ ಕ್ಷೇತ್ರ ನೇತ್ರಾವತಿ ನದಿ ಕಿನಾರೆಯಲ್ಲಿದ್ದು, ಶಿವನು ಭುಜಂಗಾಭರಣ ಲಿಂಗರೂಪಿಯಾಗಿ ಸರ್ಪಗಳಿಂದ ತುಂಬಿದ್ದ ಕಾಡಿನ (ಹಾಡಿನ) ಮಧ್ಯದಲ್ಲಿ ಕಂಗೊಳಿಸಿದ್ದರಿಂದ ಸರ್ಪನ+ಹಾಡಿ = ಸರ್ಪಪಾಡಿ ಅದೇ ಮುಂದಕ್ಕೆ ಸರಪಾಡಿ ಎಂಬ ನಾಮಾಭಿದಾನಕ್ಕೆ ಕಾರಣವಾಯಿತು. ಸುಮಾರು 17ನೇ ಶತಮಾನದಲ್ಲಿ ಜೀರ್ಣೋದ್ಧಾರಗೊಂಡಿದೆ ಎಂದು ಇಲ್ಲಿದ್ದ ಶಿಲಾಶಾಸನದಲ್ಲಿ ಉಲ್ಲೇಖ ಇತ್ತು. ಸುಮಾರು 1700-1757ರ ಮಧ್ಯದಲ್ಲಿ ಅಖಂಡ ಹಿಂದೂ ಸಾಮ್ರಾಜ್ಯವಾದ ವಿಜಯನಗರ ಅರಸರ ಆಳ್ವಿಕೆ ದುರ್ಬಲಗೊಂಡಾಗ ಅವರ ಸಾಮಂತ ರಾಜರಾದ ಕೆಳದಿಯ ಸಂಸ್ಥಾನಕ್ಕೂ ಮಡಿಕೇರಿಯ ಅರಸರಿಗೂ ವೈವಾಹಿಕ ಸಂಬಂಧ ಏರ್ಪಟ್ಟಿದ್ದರಿಂದ ಅವರೊಳಗೆ ಪರಸ್ಪರ ರಾಜತಾಂತ್ರಿಕ ವ್ಯವಹಾರ ನಡೆಯುತ್ತಿತ್ತು. ಕೆಳದಿ ಸಂಸ್ಥಾನದಲ್ಲಿ ಆಡಳಿತಗಾರರಾಗಿದ್ದ ಕುಂದಾಪುರದ ಹಲ್ಸನಾಡಿನ ಮಾದಪ್ಪಯ್ಯ ಕಾರಂತರು ರಾಜಕಾರ್ಯ ನಿಮಿತ್ತ ಕುದುರೆಯ ಮೇಲೆ ಕೆಳದಿಯಿಂದ ಮಡಿಕೇರಿಗೆ ಸಂಚಾರ ಮಾಡುತ್ತಿದ್ದಾಗ ಸರಪಾಡಿಯ ಹತ್ತಿರ ನದಿ ಕಿನಾರೆಯಲ್ಲಿ ಸಂಜೆಯಾದುದರಿಂದ ತಂಗಿದರು. ರಾತ್ರಿಯ ವೇಳೆ ಕಾರಂತರಿಗೆ ಕನಸಿನಲ್ಲಿ ಪರಮೇಶ್ವರ ದೇವರು ಗೋಚರಿಸಿ ನಾನಿಲ್ಲಿ ನೆಲೆನಿಂತಿದ್ದೇನೆ, ನನಗೆ ದೇಗುಲ ನಿರ್ಮಿಸಿ ನನ್ನನ್ನು ಪೂಜಿಸಿ ನಿಮ್ಮ ಸಾಮ್ರಾಜ್ಯಕ್ಕೆ ಕ್ಷೇಮವುಂಟಾಗುತ್ತದೆ ಎಂದು ಅಭಯವಾಯಿತು. ಮರುದಿನ ಬೆಳಿಗ್ಗೆ ಶಿವ ಸಾನಿಧ್ಯವನ್ನು ಹುಡುಕಲು ಪ್ರಾರಂಭಿಸಿದರು. ದಟ್ಟವಾದ ಕಾಡಿನ ಮಧ್ಯದಲ್ಲಿ ಬೃಹತ್ ವೃಕ್ಷದ ಕೆಳಗೆ ಹಸುವೊಂದು ನಿಂತಿದ್ದು ಅದರ ಕೆಚ್ಚಲಿನಿಂದ ತನ್ನಿಂದ ತಾನೇ ಹಾಲು ಸುರಿಯುತ್ತಿತ್ತು. ಇದನ್ನು ಗಮನಿಸಿದ ಕಾರಂತರು ಸುತ್ತಮುತ್ತಲಿನ ಪೊದೆಗಳನ್ನು ಸರಿಸಿ ನೋಡಿದಾಗ ಶಿವಲಿಂಗ ದರ್ಶನವಾಯಿತು. ರಾತ್ರಿ ಕಂಡ ಕನಸು ನನಸಾದುದರಿಂದ ದೇವರನ್ನು ಪ್ರತ್ಯಕ್ಷೀಕರಿಸಿಕೊಂಡ ಕಾರಂತರು ಇಕ್ಕೇರಿ ಸಂಸ್ಥಾನಕ್ಕೆ ಅರಿಕೆಯನ್ನು ಮಾಡಿ ಭವ್ಯವಾದ ದೇವಾಲಯವನ್ನು ನಿರ್ಮಾಣ ಮಾಡಿಸಿದರು ಎಂದು ಇತಿಹಾಸ ಹೇಳುತ್ತದೆ.

Seva details


Rudrabhisheka

Karthika Pooja

Shiva Pooja

Ashtothara Archana

Sahasranama Archana

Udayastamana Pooja

Shaneeshwara Pooja

Hoovina Pooja

sarapady temple

ಜೀರ್ಣೋಧ್ಧಾರ

ನವೀಕರಣಗೊಳ್ಳುವ ಕಾಮಗಾರಿಗಳ ವಿವರ

1. ಸುತ್ತು ಪೌಳಿ - ರೂ. 2 ಕೋಟಿ

2. ಶರಭೇಶ್ವರ ದೇವರ ಗರ್ಭ ಗುಡಿ - ರೂ. 1 ಕೋಟಿ 45 ಲಕ್ಷ

3. ತೀರ್ಥ ಮಂಟಪ - ರೂ. 75 ಲಕ್ಷ

4. ಹನುಮಂತ ದೇವರ ಗುಡಿ - ರೂ. 45 ಲಕ್ಷ

5. ಪರಿವಾರ ದೈವಗಳ ಗುಡಿಗಳು - ರೂ. 40 ಲಕ್ಷ

6. ಕೊಡಿ ಮರ - ರೂ. 19 ಲಕ್ಷ

7. ವಸಂತ ಮಂಟಪ - ರೂ. 15 ಲಕ್ಷ

8. ನಾಗದೇವರ ಕಟ್ಟೆ - ರೂ. 8 ಲಕ್ಷ

9. ಇತರ ಕೆಲಸಗಳು - ರೂ. 50 ಲಕ್ಷ

ಒಟ್ಟು ಅಂದಾಜು ವೆಚ್ಚ - ರೂ. 5 ಕೋಟಿ 97 ಲಕ್ಷ

sarapady temple
Renovation Committee

ಕ್ಷೇತ್ರ ಮತ್ತು ಭಕ್ತಾದಿಗಳ ರಕ್ಷಣೆಗೆ ಶರಭೇಶ್ವರ ದೇವರಿಗೊಂದು ಭವ್ಯ ದೇವಾಲಯ ನಿರ್ಮಾಣ ನಮ್ಮ ಸಂಕಲ್ಪವಾಗಿದೆ ...

Read more
sarapady temple
About Temple

Read more
sarapady temple
Sharabheshwara dwajasthanbha